ಬೇಬಲ್ ಗೋಪುರ -
ಇದು ಬೈಬಲ್‍ನಲ್ಲಿ ಬರುವ ಹೆಸರು. ಬಗೆ ಬಗೆಯ ಜನರಾಡುವ ಒಬ್ಬರಭಾಷೆ ಒಬ್ಬರಿಗೆ ಅರ್ಥವಾಗುವ ಭಾಷೆಗಳ ಗೊಂದಲಕ್ಕೆ ಈ ಹೆಸರಿದೆ. ಏನು ಆಡುತ್ತಿದ್ದ ಅರ್‍ಮೆಯಿಕ್ ಭಾಷೆಯಲ್ಲಿ ಬೇಬಲ್ ಎಂದರೆ ಗೊಂದಲ ಎಂದರ್ಥ. ಈ ಪದದ ಹಳೆಯ ರೂಪ ಬಾಬ್ ಈಲ್ ಎಂದು. ಇದರ ಅರ್ಥ ಗೇಟ್ ಆಫ್ ಗಾಡ್ (ಬ್ರಹ್ಮಪುರಿ) ಎಂದು. ಬ್ಯಾಬ್‍ಲೋನಿಯದ ಮೂಲವಾಸಿಗಳು ಸ್ವರ್ಗಕ್ಕೆ ದಾರಿ ಎಂದು ಇಲ್ಲಿ ಒಂದು ಗೋಪುರ ಕಟ್ಟಿದರು ಎನ್ನಲಾಗಿದೆ. ಈಚಿನ ವಿದ್ವಾಂಸರು ಈ ಗೋಪುರವನ್ನು ಬೇಬಿ ಲಾನ್‍ನಲ್ಲಿ ಹಳೆ ಜಿಕ್ಕುರಾತ್ ಅನ್ನುವ ದೇವಸ್ಥಾನದ ಅವಶೇಷವೆಂದು ಭಾವಿಸುತ್ತಾರೆ.					
  (ಎಂ.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ